Sandbox

Sandbox is a multipurpose HTML5 template with various layouts which will be a great solution for your business.

Contact Info

Moonshine St. 14/05
Light City, London

[email protected]
00 (123) 456 78 90

Learn More

Follow Us

VK HEROES

Award Categories

ವಿಕ ಹೋಮ್ ಗಾರ್ಡ್ | VK Home Guard

ಹೋಮ್ ಗಾರ್ಡ್ ಕ್ಷೇತ್ರ ಎಂಬುದು ನಿಸ್ವಾರ್ಥ ಸೇವೆಯ ಕ್ಷೇತ್ರ. ಸಮಾಜದ ರಕ್ಷಣೆ, ಸುರಕ್ಷತೆಗಾಗಿ ದುಡಿಯುವ ವರ್ಗ. ಇಲ್ಲಿ ವೇತನ ಎಂಬುದು ಕೇವಲ ಗೌರವ. ಇಲ್ಲಿ ಸೇವೆಯೇ ಪ್ರಧಾನ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಸಮಾಜದ ರಕ್ಷಣೆಗಾಗಿ ನಿಸ್ವಾರ್ಥವಾಗಿ ದುಡಿಯುವ, ದೇಶದ Bíತರಿಕ ಸುರಕ್ಷತೆಗಾಗಿ ಸೇವೆ ಮಾಡುವ ರಾಯಭಾರಿಗಳೂ ಹೌದು. ಇವರಲ್ಲಿ ಹಲವರು ಅಸಾಧಾರಣ ಸಾಧನೆ -ಸಾಹಸ ಮಾಡಿದ್ದಾರೆ. ಅಂತಹ ಸಾಧಕರಿಗೆ ನೀಡುವ ಪುರಸ್ಕಾರವೇ ವಿಕ ಹೋಮ್ ಗಾರ್ಡ್.

Home Guards are those who render selfless service to the society and are always there for the safety and security of the society. What these Home Guards earn is more respect from the society. Here service is the main motto. In a way these Home Guards are ambassadors of selfless service. There are many Home Guards among us who have made invaluable contributions. Our VK Home Guard Award is for such achievers.

ವಿಕ ಕ್ಲೀನ್ ಸಿಟಿ ವಾರಿಯರ್ | VK Clean City Warrior

ಭಾರತದಲ್ಲಿ ಸ್ವಚ್ಛತೆ ಕುರಿತು ಎಷ್ಟೇ ಜಾಗೃತಿ ಮೂಡಿಸಿದರೂ, ಅದು ಯಶಸ್ವಿಯಾಗಿಲ್ಲ. ತ್ಯಾಜ್ಯ, ಕಸಗಳು ಎಲ್ಲೆಂದರಲ್ಲಿ ಸಾಮಾನ್ಯವಾಗಿದೆ. ಸ್ವಚ್ಛ ನಗರದ ಪರಿಕಲ್ಪನೆಯಲ್ಲಿ ಮನೆಯಿಂದಲೇ ತ್ಯಾಜ್ಯ ಸಂಗ್ರಹ ಆರಂಭಗೊಂಡಿದ್ದರೂ, ಕೆಲವರು ಇಂದಿಗೂ ನಿರ್ಜನ ಪ್ರದೇಶಗಳಲ್ಲಿ ತ್ಯಾಜ್ಯ ಎಸೆದು ತಮ್ಮ ಮನೆಯನ್ನು ಸ್ವಚ್ಛವಾಗಿಡುತ್ತಾರೆ. ನಮ್ಮ ಮನೆ ಮಾತ್ರವಲ್ಲ, ಸಮಾಜ, ನಗರ, ಊರು, ತಾಲೂಕು, ಜಿಲ್ಲೆ, ರಾಜ್ಯ, ದೇಶ ಸ್ವಚ್ಛವಾಗಿರಬೇಕು. ಎಲ್ಲರೂ ಕ್ಲೀನ್ ಸಿಟಿ ವಾರಿಯರ್ ಆಗಬೇಕು ಎಂಬ ಉದ್ದೇಶದಿಂದ ಕ್ಲೀನ್ ಸಿಟಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸುವುದೇ ವಿಕ ಕ್ಲೀನ್ ಸಿಟಿ ವಾರಿಯರ್ ಪುರಸ್ಕಾರ.

A Clean City is a pleasure to the eyes of the citizens. But our cities have not been able to  remain spotlessly clean despite immense efforts and awareness. The need of the hour is for us to ensure that not only our homes, but also our surroundings, our villages and cities are clean. There are many who are striving to keep their cities, towns and villages clean. It is a humble attempt to honour such  achievers through VK Clean City Warrior Award.

ವಿಕ ಆಟೋ ಸಾರಥಿ | VK Auto Sarathi

ಆಟೋ ಚಾಲಕ ನಗರ – ಗ್ರಾಮೀಣ ಭಾಗದ ಜನರ ಸಾರಥಿ. ಆಟೋ ಇಲ್ಲದ ಬದುಕು ಊಹಿಸಲೂ ಅಸಾಧ್ಯ. ಹಲವು ಆಟೋ ಚಾಲಕರು ಕರ್ತವ್ಯವೇ ದೇವರ ಸೇವೆ ಎಂದು ನಂಬಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಟೋದಲ್ಲಿ ಬಿಟ್ಟು ಹೋದ ಸೊತ್ತುಗಳನ್ನು ಪ್ರಾಮಾಣಿಕವಾಗಿ ಪ್ರಯಾಣಿಕರಿಗೆ ಹಿಂತಿರುಗಿಸುವುದರೊíದಿಗೆ ಕೆಲವರು ನಿರ್ಧಿಷ್ಟ ಸಂದರ್ಭದಲ್ಲಿ ಉಚಿತ ಸೇವೆ ಸಲ್ಲಿಸುವ ಬ¨Üœತೆಯನ್ನೂ ತೋರಿಸುತ್ತಿದ್ದಾರೆ. ರಸ್ತೆ ಅಪಘಾತ ಸಂದರ್ಭ, ಗರ್ಭಿಣಿಯರಿಗೆ ಆಸ್ಪತ್ರೆ ದಾಖಲು, ಚುನಾವಣೆ ಸಂದರ್ಭ ಹೀಗೆ ಹಲವು ಸಂದರ್ಭಗಳಲ್ಲಿ ಉಚಿತ ಸೇವೆ ಸಲ್ಲಿಸುವ ಬದ್ಧತೆಯೊಂದಿಗೆ ಕೆಲಸ ಮಾಡುತ್ತಾರೆ. ಅಂತಹ ನಿಜವಾದ ಸಮಾಜ ಸೇವೆ ಮಾಡುವ ಆಟೋ ಚಾಲಕರನ್ನು ಗುರುತಿಸುವ ಪುರಸ್ಕಾರವೇ ವಿಕ ಆಟೋ ಸಾರಥಿ.

Autorickshaw drivers play a crucial role both in rural and urban areas in ferrying passengers. We cannot think of our lives without autorickshaws and autorickshaw drivers are our true friends in times of need.

We have many examples of exemplary autorickshaw drivers who have shown great qualities of honesty and service to mankind even in toughest of times.

A small effort by Vijay Karnataka to honour such unsung heroes through VK Auto Sarathi Award.

ವಿಕ ಬಸ್ ಸಾರಥಿ | VK Bus Sarathi

ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಬಸ್ ಪ್ರಮುಖವಾಗಿದೆ. ಖಾಸಗಿ ಮತ್ತು ಸರಕಾರಿ ಸಾರಿಗೆ ವ್ಯವಸ್ಥೆಯನ್ನು ಜನರು ನಂಬಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಿತ ರೀತಿಯಲ್ಲಿ ಗ್ರಾಮಾಂತರ ಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ಮಂಗಳೂರು ನಗರ ಭಾಗದಲ್ಲಿ ಖಾಸಗಿ ಬಸ್ ಪ್ರಧಾನ ಪಾತ್ರ ವಹಿಸುತ್ತಿದೆ. ಸಾರ್ವಜನಿಕರ ಜೀವ ತನ್ನ ಕೈಯಲ್ಲಿದೆ ಎಂಬ ಜವಾಬ್ದಾರಿಯಿಂದ ಅಪಘಾತವಾಗದಂತೆ ಬಸ್ ಚಲಾಯಿಸಿ, ನಿಜವಾದ ಸಾರಥಿಯಾಗಿ ಹಲವು ಚಾಲಕರು ಸೇವೆ ಸಲ್ಲಿಸುತ್ತಿದ್ದಾರೆ. ಸಮಯಪ್ರಜ್ಞೆ ತೋರಿಸಿ ಜೀವಾಪಾಯ ತಪ್ಪಿಸಿದ ಹಲವು ಚಾಲಕರೂ ಇದ್ದಾರೆ. ಅಂತಹ ಚಾಲಕರನ್ನು ಗುರುತಿಸುವ ಪುರಸ್ಕಾರವೇ ವಿಕ ಬಸ್ ಸಾರಥಿ.

Buses are the lifeline of any city or town providing conveyance facility to thousands and thousands of ordinary citizens even to the remotest of places. Drivers of buses ought to have a great sense of responsibility and must keep the safety of the passengers uppermost in their minds. There have been several instances of bus drivers showing great presence of minds in the most difficult times, thus helping in saving lives. VK Bus Sarathi is a sincere attempt to recognise and honour such outstanding drivers.

ವಿಕ ಡಾಕ್ಟರ್ | VK Doctor

ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಬಸ್ ಪ್ರಮುಖವಾಗಿದೆ. ಖಾಸಗಿ ಮತ್ತು ಸರಕಾರಿ ಸಾರಿಗೆ ವ್ಯವಸ್ಥೆಯನ್ನು ಜನರು ನಂಬಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಿತ ರೀತಿಯಲ್ಲಿ ಗ್ರಾಮಾಂತರ ಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ಮಂಗಳೂರು ನಗರ ಭಾಗದಲ್ಲಿ ಖಾಸಗಿ ಬಸ್ ಪ್ರಧಾನ ಪಾತ್ರ ವಹಿಸುತ್ತಿದೆ. ಸಾರ್ವಜನಿಕರ ಜೀವ ತನ್ನ ಕೈಯಲ್ಲಿದೆ ಎಂಬ ಜವಾಬ್ದಾರಿಯಿಂದ ಅಪಘಾತವಾಗದಂತೆ ಬಸ್ ಚಲಾಯಿಸಿ, ನಿಜವಾದ ಸಾರಥಿಯಾಗಿ ಹಲವು ಚಾಲಕರು ಸೇವೆ ಸಲ್ಲಿಸುತ್ತಿದ್ದಾರೆ. ಸಮಯಪ್ರಜ್ಞೆ ತೋರಿಸಿ ಜೀವಾಪಾಯ ತಪ್ಪಿಸಿದ ಹಲವು ಚಾಲಕರೂ ಇದ್ದಾರೆ. ಅಂತಹ ಚಾಲಕರನ್ನು ಗುರುತಿಸುವ ಪುರಸ್ಕಾರವೇ ವಿಕ ಬಸ್ ಸಾರಥಿ.

Buses are the lifeline of any city or town providing conveyance facility to thousands and thousands of ordinary citizens even to the remotest of places. Drivers of buses ought to have a great sense of responsibility and must keep the safety of the passengers uppermost in their minds. There have been several instances of bus drivers showing great presence of minds in the most difficult times, thus helping in saving lives. VK Bus Sarathi is a sincere attempt to recognise and honour such outstanding drivers.

ವಿಕ ಟ್ರಾಫಿಕ್ ಪೊಲೀಸ್ | VK Traffic Police

ನಗರ ಬೆಳೆಯುತ್ತಿದ್ದಂತೆ ಎದುರಾಗುವ ಮೂಲ ಸಮಸ್ಯೆಯೇ ಟ್ರಾಫಿಕ್. ಸುಗಮ ಸಂಚಾರ ಎಂಬುದು ಆದ್ಯತೆಯೂ ಹೌದು. ನಗರ ಬೆಳೆಯಲು ಪೂರಕವೂ ಹೌದು. ಹೆಚ್ಚುತ್ತಿರುವ ವಾಹನ ದಟ್ಟಣೆ, ಪ್ರತಿಭಟನೆ, ಜಾತ್ರೆ, ಹಬ್ಬ, ಸಭೆ – ಸಮಾರಂಭಗಳ ನಡುವೆಯೂ ಸುಗಮ ಸಂಚಾರಕ್ಕಾಗಿ ಹಗಲಿರುಳು ದುಡಿಯುವ ವರ್ಗ ಎಂದರೆ ಟ್ರಾಫಿಕ್ ಪೊಲೀಸ್. ಜನರ ಆದ್ಯತೆಗಾಗಿ ದುಡಿಯುವ ಈ ಸಮುದಾಯವನ್ನು ಗುರುತಿಸುವ ವಿಭಾಗವೇ ವಿಕ ಟ್ರಾಫಿಕ್ ಪೊಲೀಸ್ ಪುರಸ್ಕಾರ.

One problem that haunts every developing city is the traffic problem. Smooth and regulated traffic movement is also key to the progress of a city.

In this context, the role of traffic police personnel is noteworthy. VK Traffic Police Award is aimed at identifying and honouring outstanding traffic policemen.

ವಿಕ ಆರೋಗ್ಯ ವಾರಿಯರ್ | VK Health Warrior

ಸಮಾಜರ ಆರೋಗ್ಯ ಕಾಪಾಡುವಲ್ಲಿ ವೈದ್ಯರ ಪಾತ್ರ ಎಷ್ಟು ಮುಖ್ಯವೋ, ಆರೋಗ್ಯ ಕ್ಷೇತ್ರದಲ್ಲಿರುವ ಇತರರೂ ಅಷ್ಟೇ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಆದರೆ ಅವರ ಸೇವೆ ಗುರುತಿಸುವುದೇ ಸವಾಲು. ಯಾಕೆಂದರೆ ಅವರು ಎಲೆಮರೆಯ ಕಾಯಿ ಇದ್ದಂತೆ. ಬಾಹ್ಯ ಪ್ರಪಂಚಕ್ಕೆ ಎಲೆ ಮಾತ್ರ ಕಾಣಿಸುತ್ತದೆ. ಕಾಯಿ ಕಾಣಿಸುವುದಿಲ್ಲ. ಸಮಯಪ್ರಜ್ಞೆ ಮೆರೆದು ಅವರು ತಮ್ಮ ವಿದ್ಯೆಯನ್ನು ಮೀರಿ ಅನುಭವದ ಆಧಾರದಲ್ಲಿ ಜವಾಬ್ದಾರಿ ನಿರ್ವಹಿಸಿ ಜೀವಾಪಾಯದಿಂದ ಪಾರು ಮಾಡುತ್ತಾರೆ. ಇಂತಹ ಸಾಧಕರೇ ವಿಕ ಆರೋಗ್ಯ ವಾರಿಯರ್.

Just like Doctors, Health Workers also play a crucial role in saving many a life. Health workers play a very significant role in rural areas, especially remote places and strive to reach out health care facilities.

Their dedication, sincerity and service mindedness are praiseworthy. VK Health Warrior aims to honour such selfless Health workers.

ವಿಕ ಆರೋಗ್ಯ ರಕ್ಷಕ | VK Life Saver

ವೈದ್ಯರು ಸಮಾಜದ ಜೀವವನ್ನು ಹೇಗೆ ರಕ್ಷಿಸುತ್ತಾರೋ, ಅದೇ ರೀತಿ ಕೆಲವೊಂದು ತುರ್ತು ಸಂದರ್ಭ ಸಾರ್ವಜನಿಕರೂ ಜೀವ ರಕ್ಷಕರಾಗಿ ಬರುತ್ತಾರೆ. ತಮ್ಮ ಜೀವದ ಹಂಗನ್ನೂ ತೊರೆದು ಸಾಹಸ ಮಾಡಿ ಜೀವ ರಕ್ಷಣೆ, ಒಂದು ಕ್ಷಣದ ಕರ್ತವ್ಯ ಪರತೆಯು ಜೀವವನ್ನು ಉಳಿಸಿದ ಹಲವು ನಿದರ್ಶನಗಳೂ ಇವೆ. ಆದರೆ ಅವರು ಒಂದು ಕ್ಷಣಕ್ಕೆ ಮಾತ್ರ ನೆನಪಾಗುತ್ತಾರೆ. ಅವರ ಸಾಹಸ, ಸೇವೆ, ಕರ್ತವ್ಯ ಪರತೆಯನ್ನು ಇತಿಹಾಸ ಪುಟದಲ್ಲಿ ದಾಖಲಿಸಬೇಕು ಎಂಬ ಉದ್ದೇಶದಿಂದ ವಿಕ ಆರೋಗ್ಯ ರಕ್ಷಕ ಪುರಸ್ಕಾರ ನೀಡಲು ಉದ್ದೇಶಿಸಿದೆ.

During times of health emergencies, there have been some occasions when Good Samaritans have played a key role in lending a helping hand by risking their own lives.

Their service mindedness and their presence of mind are truly laudable.  VK Life Saver Award is dedicated to such people.

ವಿಕ ಟೀಚರ್ | VK Teacher

ಮಾತೃ ದೇವೋಭವ ಪಿತೃ ದೇವೋಭವ. ಈ ಸಾಲಿನಲ್ಲಿ ಮೂರನೇಯದು ಆಚಾರ್ಯ ದೇವೋಭವ. ವಿದ್ಯೆ ಕಲಿಸಿದ ಗುರು ದೇವರಿಗೆ ಸಮಾನ ಎಂದು ನಂಬಿರುವ ಸಂಸ್ಕೃತಿ ನಮ್ಮದು. ಶಿಕ್ಷಕರು ಕೂಡ ಅದೇ ಮಟ್ಟದ ಔನ್ನತ್ಯ ಕಾಪಾಡಿಕೊಂಡು ಬಂದಿದ್ದಾರೆ.

ಒಂದು ಪುಟ್ಟ ಮಗುವನ್ನು ಸಮಾಜದ ಶಕ್ತಿವಂತ, ಸಬಲ ನಾಗರಿಕನಾಗಿ ಮಾಡುವ ಅಪೂರ್ವ ಜವಾಬ್ದಾರಿ ಹೊತ್ತವರು ಅವರು. ತಮ್ಮ ವೃತ್ತಿ ಬದುಕಿನೊಂದಿಗೆ ಸಮಾಜದ ಏಳ್ಗೆಗಾಗಿ ದುಡಿಯುವ ಶಿಕ್ಷಕ ವರ್ಗವನ್ನು ನಾವು ಕಾಣುತ್ತೇವೆ. ಅಂತಹ ಶಿಕ್ಷಕರನ್ನು ಗುರುತಿಸುವ ಪುರಸ್ಕಾರವೇ ವಿಕ ಟೀಚರ್.

Our scriptures mention of Matra Devobhava, Pitra Devobhava, Acharya Devobhava which means – Be the one who respects Mother, Father and Teacher on par with God. Ours is the culture which accords the highest respect to teachers. Even our teachers have maintained high standards of excellence in teaching. They have the onerous responsibility of moulding the future of their students. We have many teachers amongst us who work for the welfare of the society while also discharging their duties as a teacher with utmost sincerity. An Award that recognizes and honours such teachers is VK Teacher.

ವಿಕ ಪರಿಸರ ಸ್ನೇಹಿ | VK Environment Friendly

ಪ್ರಕೃತಿಯದ್ದು ಸಂಪೂರ್ಣ ಪರೋಪಕಾರಿ ಬದುಕು. ಆದರೆ ನಾವಿಂದು ಪರಿಸರಕ್ಕಾಗಿ ಏನನ್ನು ಕೊಟ್ಟಿದ್ದೇವೆ, ಕೊಡುತ್ತಿದ್ದೇವೆ ಎಂಬುದನ್ನು ಪ್ರತಿಯೊಬ್ಬನೂ ತನಗೆ ತಾನೇ ಹಾಕಿಕೊಳ್ಳಬೇಕಾದ ಪ್ರಶ್ನೆ. ಉತ್ತರ ಮಾತ್ರ ನಗಣ್ಯ. ಕೊನೆ ಪಕ್ಷ ಇರುವ ಪರಿಸರವನ್ನು ರಕ್ಷಿಸಿಕೊಳ್ಳುವ ಬಗ್ಗೆ ಕಿಂಚಿತ್ತೂ ಯೋಚಿಸಲಾಗದಷ್ಟು ನಿಷ್ಕಾಳಜಿ. ಆದರೆ ಕೆಲವೊಂದು ಮಂದಿ ಪ್ರಕೃತಿಯೊಂದಿಗೆ ಬದುಕು ಸಾಗಿಸುವ ವೇಳೆ ಪ್ರಕೃತಿಯನ್ನು ಆರಾಧಿಸಿಕೊಂಡು ಪ್ರಕೃತಿಯ ರಕ್ಷಣೆಗಾಗಿ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ಪ್ರಕೃತಿಯೊಂದಿಗೆ ಬದುಕುವ ಪ್ರಕೃತಿಗಾಗಿ ಬದುಕುವ ಪ್ರಕೃತಿ ಸ್ನೇಹಿಯನ್ನು ಗುರುತಿಸುವ ಪುರಸ್ಕಾರವೇ ವಿಕ ಪರಿಸರ ಸ್ನೇಹಿ.

Nature is a great wealth that has to be nurtured and protected. It is our environment that helps us survive and we need to protect and conserve it at any cost in this age when man’s greed and selfishness is taking toll on nature and environment. Man has to learn to live in harmony with nature.

We have many nature lovers and environmentalists who are tirelessly striving to protect mother earth. Vijay Karnataka aims to honour such dedicated men with VK Environment Friendly Award.

ವಿಕ ಪ್ರಾಣಿ ಪ್ರಿಯ | VK Animal Lover

ಪ್ರಾಣಿಗಳು ನಮ್ಮೊಂದಿಗೆ ಬದುಕು ಸಾಗಿಸುವ ಜೀವಿಗಳು. ಪ್ರಾಣಿಗಳ ಜೀವಕ್ಕೆ ಅಪಾಯವಾದಾಗ, ಅವುಗಳಿಗೆ ಗಾಯವಾದಾಗ ಪ್ರಾಣಿ ಪ್ರಿಯರು ಅವುಗಳ ಆರೈಕೆ ಮಾಡುತ್ತಾರೆ. ಕಾಡುಪ್ರಾಣಿಗಳಾದರೆ ಆರೈಕೆ ಮಾಡಿ ಮತ್ತೆ ಕಾಡಿಗೆ ಬಿಡುತ್ತಾರೆ. ಬೀಡಾಡಿ ಪ್ರಾಣಿಗಳಾದರೆ ಅವುಗಳನ್ನು ಸಾಕುತ್ತಾರೆ. ಅವುಗಳಿಗಾಗಿ ಕೇಂದ್ರ ನಿರ್ಮಿಸುತ್ತಾರೆ. ಕೆಲವರು ನಿತ್ಯವೂ ಆಹಾರ ಒದಗಿಸಿ, ಆರೈಕೆ ಮಾಡುತ್ತಾರೆ. ಪ್ರೀತಿ ತೋರಿಸುತ್ತಾರೆ. ಅಲ್ಲಿ ಯಾವುದೇ ಸ್ವಾರ್ಥ ಇರುವುದಿಲ್ಲ. ಆರ್ಥಿಕ ಲಾಭ, ಹಣದ ಮೋಹ, ಅಧಿಕಾರದ ಲಾಲಸೆ ಇರುವುದಿಲ್ಲ. ಪ್ರಾಣಿಗಳ ಮೇಲಿನ ಮಮತೆ ಮಾತ್ರ ಇರುತ್ತದೆ. ಆ ಮಮತೆಯು ಅವರನ್ನು ಪ್ರಾಣಿ ಸೇವೆ ಮಾಡಿಸುತ್ತದೆ. ಹೀಗೆ ಮೂಕ ಪ್ರಾಣಿಗಳ ಆರೈಕೆ ಮಾಡುವವರಿಗೆ ನೀಡುವ ಪುರಸ್ಕಾರವೇ ವಿಕ ಪ್ರಾಣಿ ಪ್ರಿಯ

Pet animals are man’s best friends. They bring joy to our lives. Caring for animals, particularly orphan and stray animals is a great service.

There are many in the society who provide shelter to stray cattle, dogs, cats and nurture them. Vijay Karnataka’s little effort to recognise and honour such animal lovers through VK Animal Lover.

ವಿಕ ಅನಾಥ ಮಕ್ಕಳ ರಕ್ಷಕ | VK Orphan Children Saviour

ಮಕ್ಕಳು ದೇವರಿಗೆ ಸಮ. ನಾನಾ ಕಾರಣಗಳಿಂದಾಗಿ ಅನಾಥ ಮಕ್ಕÙÜá ಸಮಾಜದಲ್ಲಿ ಕಂಡುಬರುತ್ತಿರುವುದು ನೋವಿನ ವಿಚಾರ. ಅಂತಹ ಮಕ್ಕಳಿಗೆ ಆಶ್ರಯ ನೀಡಿ, ಅವರನ್ನು ಸಾಕಿ, ಸಲಹಿ, ಅವರಿಗೆ ಉತ್ತಮ ಶಿಕ್ಷಣ ನೀಡಿ ನಾಗರಿಕರನ್ನಾಗಿ ಮಾಡುವ ಕೆಲಸವನ್ನು ಹಲವು ಮಂದಿ ಮಾಡುತ್ತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳ ಆರೈಕೆ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳು-ಸಂಘ ಸಂಸ್ಥೆಗಳು ನಿಜಕ್ಕೂ ಮಕ್ಕಳಲ್ಲಿ ದೇವರನ್ನು ಕಾಣುತ್ತಾರೆ. ಹೀಗೆ ಅನಾಥ ಮಕ್ಕಳ ಆರೈಕೆ ಮಾಡುವವರಿಗೆ ನೀಡುವ ಪುರಸ್ಕಾರವೇ ವಿಕ ಅನಾಥ ಮಕ್ಕಳ ರಕ್ಷಕ.

Children are our future. Today there are many children who are orphaned and are taken care in orphanages by providing them education and helping them lead a self-reliant life. Social workers who are into this field of taking care of orphan children are rendering a great service to mankind. Vijay Karnataka makes a sincere effort in recognising and honouring such service minded individuals through VK Orphan Children Saviour Award.